Tecno pova curve 2 5G mobile
Tecno ನ ಹೊಸ ಮೊಬೈಲ್ ಇತ್ತೀಚೆಗೆ ಮಾರುಕಟ್ಟೆಗೆ ಬಂದಿದ್ದು, Tecno ಈ ಸಲ ಒಂದು ಹೊಸ ಪ್ರಯತ್ನವನ್ನು ಮಾಡಿದೆ. Curve ಎಂಬ ಶಬ್ದದಿಂದಲೇ ತಿಳಿದು ಬರುವುದೇನೆಂದರೆ ಇದು Tecno ನ curve series ಮೊಬೈಲ್ ಆಗಿದೆ. ಈ ಬಾರಿಗೆ Curve ಎಷ್ಟೆಲ್ಲಾ ಹೊಸ ಡಿಸೈನ್ ಅನ್ನು ಕೂಡ ಪರಿಚಯಿಸಿದೆ.
ಮೊಬೈಲ್ ಬಾಕ್ಸ್ ಅನ್ನು ಅನ್ ಬಾಕ್ಸ್ ಮಾಡಿದಾಗ ಮೊಬೈಲ್
ನ ಹೊಸ ರೂಪ ನಮಗೆ ಕಾಣಲು ಸಿಗುತ್ತದೆ, ಇದರಲ್ಲಿ Quick guide, TPU transperant case, type C cable, 45 voltage charger ಲಭ್ಯವಿದೆ.
ಮೊಬೈಲ್ ಅನ್ನು ಗಮನಿಸಿದಾಗ ಪ್ರೀಮಿಯಂ ಲುಕ್ ಇದು ಅದರ ಹಿಂಬದಿಯು polycarbonate matt finishing ಅನ್ನು ಹೊಂದಿದೆ. ಪ್ರೇಮ್ ಕೂಡ polycarbonate ದಿಂದ ಕೂಡಿದೆ. ಕೆಲವು ದಿನಗಳಿಂದ ಗಮನಿಸಿದಾಗ Tecno ಹೊಸ ಹೊಸ design ಕುರಿತು ಸಂಶೋಧನೆ ಮಾಡುತ್ತಿದೆ ಹಾಗೂ ಜನರು ಇದನ್ನು ಇಷ್ಟಪಡುತ್ತಿದ್ದು, ಇದು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಹಳೆಯ Tecno pova curve mobile ವರ್ಟಿಕಲ್ ಕ್ಯಾಮೆರಾವನ್ನು ಹೊಂದಿತ್ತು ಆದರೆ ಈ ಹೊಸ ಮಾಡೆಲ್ ದಲ್ಲಿ ಕ್ಯಾಮೆರಾ ಮಾಡೆಲ್ ಬೋಲ್ಡ್ ಟ್ರಯಾಂಗಲ್ ಶೇಪ್ ದಲ್ಲಿ ಪರಿಚಯಿಸಿದೆ. ಈ ಡಿಸೈನ್ Space craft thrusters ನಿಂದ ಸ್ಫೂರ್ತಿ ಹೊಂದಿದೆ. ಒಂದು ವೇಳೆ ಈ ಮೊಬೈಲ್ ಅನ್ನು ನೀವು ಕೊಂಡು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಇದು ಯಾವ ಮೊಬೈಲ್ ಮಾಡೆಲ್ ಎಂದು ಕೇಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದು 8000 MAh battery, 7.42 mm ದಪ್ಪ, 195 ಗ್ರಾಂ ತೂಕ ಹೊಂದಿದೆ. ಈ ಮೊಬೈಲ್ ನಲ್ಲಿ ಮೂರು ಪ್ರಕಾರದ ಬಣ್ಣಗಳು ಲಭ್ಯವಿದೆ. ಅವುಗಳೆಂದರೆ
1. Storm Titanium
2. Mystic Purple
3. Melting silver
6.78 inch ನ FHD + Curve amoled display ಇದೆ. ಮೊಬೈಲ್ ಅನ್ನು ಸ್ಟಾರ್ಟ್ ಮಾಡಿದಾಗ ನಯವಾದ ಕೆಲಸ ಮಾಡುತ್ತದೆ. ಯೂಟ್ಯೂಬ್ ವಿಡಿಯೋ ನೋಡುವಾಗ 2160 P60 HDR ವಿಡಿಯೋ ನೋಡಬಹುದು. HDR ಸರ್ಟಿಫಿಕೇಟ್ ಅನ್ನು ಕೂಡ ಪಡೆದಿದೆ. 93.18% ಸ್ಕ್ರೀನ್ ಟು ಬಾಡಿ ರೇಶಿಯೋ ಇದೆ. 4500 nits ವರೆಗೆ peack brightness ದೊರೆಯುತ್ತದೆ. ಗೊರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ಇದು ಒಳಗೊಂಡಿದೆ ಹಾಗೂ SGS 5 star drop protection ಜೊತೆಗೆ ಬರುತ್ತದೆ.
ಇದರಲ್ಲಿ ವಿವಿಧ ರೀತಿಯ ವಾಲ್ಪೇಪರ್ಗಳು ದೊರೆಯುತ್ತವೆ ಅವುಗಳು ತುಂಬಾ ರೋಚಕವಾಗಿದ್ದು 3d ಪ್ರಭಾವ ಕಾಣಲು ಸಿಗುತ್ತದೆ. ಮೊಬೈಲ್ ನ ಬಲಬದಿಗೆ ವಾಲ್ಯೂಮ್ ಬಟನ್ ಮತ್ತು ಪವರ್ ಬಟನ್ ದೊರೆಯುತ್ತವೆ. ಮೊಬೈಲ್ ನ ಮೇಲು ಬದಿಗೆ noise cancellation ಇದೆ. ಎಡ ಬದಿಗೆ ಯಾವುದೇ ರೀತಿಯ ಯಾವುದೇ ರೀತಿಯ ಆಪ್ಷನ್ಗಳು ಇರುವುದಿಲ್ಲ. ಮೊಬೈಲ್ ನ ಕೆಳಬದಿಗೆ ಟೈಪ್ ಸಿ, ಸ್ಪೀಕರ್ , ಮೈಕ್ರೋಫೋನ್ ಮತ್ತು ಸಿಮ್ ಸ್ಲಾಟ್ ಕಾಣುತ್ತೇವೆ. ಇದು dual sim slot ಅನ್ನು ಹೊಂದಿದೆ.
ಇದು Linear vibration motor ಹೊಂದಿದೆ , ಸ್ಪೀಕರ್ ಗುಣಮಟ್ಟ ಸಾಧಾರಣವಾಗಿದ್ದು, ಇದು ಸಿಂಗಲ್ ಸ್ಪೀಕರ್ ಹೊಂದಿದೆ. 50 MP Ai camera, 2MP macro camera ಎಂಬ dual camera ಹಾಗೂ 13 MP front Ai selfie camera ಹೊಂದಿದೆ.
ಇದರಲ್ಲಿ ultrawide , OIS camera ವನ್ನು ಅಳವಡಿಸಲಾಗಿಲ್ಲ. ಸಿಂಗಲ್ ಕ್ಯಾಮೆರಾ ವನ್ನು ಹೊಂದಿದ್ದರು ಉತ್ತಮ ಗುಣಮಟ್ಟದ ಫೋಟೋಗಳು ಬರುತ್ತವೆ.
ಕ್ಯಾಮೆರಾ ವೈಶಿಷ್ಟ್ಯಗಳು :
AIGC portrait mode ಇದರಲ್ಲಿ ಲಭ್ಯವಿತ್ತು, ಇದು ಆಸಕ್ತಿದಾಯಕವಾದ ಫೋಟೋಗಳನ್ನು ರಚಿಸಿ ಕೊಡುತ್ತದೆ. 2k 30 fps camera ಮೂಲಕ ವಿಡಿಯೋ ಶೂಟ್ ಮಾಡಬಹುದು. ಫ್ರಂಟ್ ಕ್ಯಾಮೆರಾದಲ್ಲೂ ಕೂಡ ಇದೆ ಆಪ್ಷನ್ಸ್ ನಿಂದ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ. ಇನ್ನು ಅನೇಕ ಆಪ್ಷನ್ ಗಳು ಕೂಡ ಇದರಲ್ಲಿ ಲಭ್ಯವಿದೆ.
ಇದರ ಪರ್ಫಾರ್ಮಿಂಗ್ ನೋಡುವುದಾದರೆ ಗೇಮಿಂಗ್ ಟೆಸ್ಟ್ ದಲ್ಲಿ BGMI 60 FPS GAMING ಬೆಂಬಲ ವಿದ್ದು, BGMI 90 FPS gaming ಇದರಲ್ಲಿ ಲಭ್ಯವಿಲ್ಲ.
Processor – 2.4 clocked mediatek dimensity 7100(6nm) chip ಒಳಗೊಂಡಿದೆ. ಇದು Balance chip set ಹೊಂದಿದ್ದು ಪ್ರತಿದಿನದ ಟಾಸ್ಕ ಗಳನ್ನು ಸುಲಭವಾಗಿ ಮಾಡುತ್ತದೆ. ಹಾರ್ಡ್ ಕೋರ್ ಗೇಮಿಂಗ್ ಆಡುವವರಿಗೆ ಪರ್ಫಾರ್ಮೆನ್ಸ್ ಗೇಮಿಂಗ್ ಮೊಬೈಲ್ ಇದಾಗಿಲ್ಲ.
ಸ್ಟೋರೇಜ್
8 GB RAM
LPDDRSX
ROM 128 GB / 256 GB
USF 2.2
Battery backup ತುಂಬಾ ಚೆನ್ನಾಗಿದೆ ಇದು ಸಾಫ್ಟ್ ವೇರ್ ಆಂಡ್ರಾಯ್ಡ್ 16 ಅನ್ನು ಹೊಂದಿದೆ. ಆರು ವರ್ಷಗಳ OS+SW Updates ಗಳು ದೊರೆಯುತ್ತದೆ.
ಟೆಕ್ನೋ ವು ತನ್ನ ಎಐ ಫ್ಯೂಚರ್ದಲ್ಲಿ ಯಾವುದೇ ಕಡಿಮೆ ಮಾಡಿಲ್ಲ. ಅಧಿಕ ಪ್ರಮಾಣದಲ್ಲಿ ಎಐ ಫೀಚರ್ ನೀಡಿದ್ದು ಇದು ಇದರದೇ ಆದ “ELLA AI 2.0” feature ಕೂಡ ಹೊಂದಿದೆ. ಇದು ಸ್ಥಳೀಯ ಭಾಷೆಗಳಿಗೂ ಕೂಡ ಬೆಂಬಲ ನೀಡಿದ್ದು ಇದರ ಸಹಾಯದಿಂದ ಅನೇಕ ಕೆಲಸಗಳನ್ನು ಮಾಡಬಹುದು.
ELLA AI ಇಮೇಜ್ ಜನರೇಟ್ ಪ್ರಾಬ್ಲಮ್ ಸಾಲ್ವಿಂಗ್ ಫ್ಯೂಚರ್ಗಳು ಇದರಲ್ಲಿ ಇವೆ. ಡಾಕ್ಯುಮೆಂಟ್ ಸ್ಕ್ಯಾನರ್ ಕೂಡ ಇದರಲ್ಲಿ ದೊರೆಯುತ್ತದೆ.
ಸಂಪರ್ಕವನ್ನು ನೋಡುವುದಾದರೆ:
1. 20 5G bands
2. No NFC
3. Dual band wi fi
4. Bluetooth V5.2
5. Signal 2.0 chip
ಸಮರ್ಪಿತ ನೆಟ್‌ವರ್ಕ್ ಸಲುವಾಗಿ ಇದರಲ್ಲಿ G1 & SE1 Chip ಇರಿಸಲಾಗಿದೆ. ಇದು ಕರೆ ಮತ್ತು ನೆಟ್ವರ್ಕ್ ಸುಧಾರಿಸಲು ಹಾಗೂ ನೆಟ್ ವರ್ಕ್ ಗೆ ಸಂಬಂಧಿಸಿದ ಸಮಸ್ಯೆ ಬಗೆ ಹರಿಸಲು ಸಹಕರಿಸುತ್ತದೆ.
ಇದರಲ್ಲಿ ನೋ ನೆಟ್ವರ್ಕ್ ಕಮ್ಯುನಿಕೇಶನ್ 2.0 ಇದ್ದು, ನೆಟ್ ವರ್ಕ್ ಇಲ್ಲದೇ ಕೂಡ 2 ಕಿಮೀ ವರೆಗೆ ಕರೆ ಮೆಸೇಜ್ ಇಮೇಜ್ ಗಳನ್ನು ಶೇರ್ ಮಾಡಬಹುದು, ಅದು ಕೂಡ ಸಿಮ್ ಹಾಗೂ ನೆಟ್ವರ್ಕ್ ಇಲ್ಲದೆ.
ಭಾರತದ ಮೊದಲ scenario Ai noise reduction feature ಇದರಲ್ಲಿ ಲಭ್ಯವಿದೆ. ಇದರ ಸಹಾಯದಿಂದ ಹಿನ್ನೆಲೆ ಧ್ವನಿ ಕಡಿತ (background sound cut) ಮಾಡಿ ಮುಂದಿನ ಅಥವಾ ಕರೆಯಲ್ಲಿರುವ ವ್ಯಕ್ತಿಯ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತದೆ.
ಇದರ ಬೆಲೆಯನ್ನು ನೋಡುವುದಾದರೆ:
1) 8 GB, 128 GB ನ ಬೆಲೆ 27,999/-
2) 8 GB, 256 GB ನ ಬೆಲೆ 29,999/-
ಪ್ರಮುಖ ಬ್ಯಾಂಕುಗಳ ಅನುಗುಣವಾಗಿ 3000 ಕ್ಯಾಶ್ ಬ್ಯಾಕ್ ಸಿಗುವ ಸಾಧ್ಯತೆ ಇದೆ.
ಟೆಕ್ನೋ ಮೊಬೈಲ್ ನಲ್ಲಿ ಡಿಸೈನ್, ಡಿಸ್ ಪ್ಲೇ, ಮತ್ತು ಬ್ಯಾಟರಿ ಗೆ ಹೆಚ್ಚು ಒತ್ತನ್ನು ನೀಡಿದೆ. ಇದೇ ವೈಶಿಷ್ಟ್ಯ ಈ ಮೊಬೈಲ್ ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಿನ್ಯಾಸವನ್ನು ಗಮನಿಸಿದಾಗ ಉತ್ತಮ ಪ್ರದರ್ಶನ ನೀಡಿದೆ. ಒಂದು ವೇಳೆ ಯಾವಾಗಲೂ ಕಂಡು ಬರುವ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಿಂದ ಬೇಸರರಾಗಿದ್ದರೆ, ಈ ಹೊಸ ವಿನ್ಯಾಸದ ಮೊಬೈಲ್ ನ್ನು ಕೊಳ್ಳಬಹುದಾಗಿದೆ ಹಾಗೂ ಇದು ತುಂಬಾ ಆಕರ್ಷಿತವಾಗಿಯೂ ಇದೆ.
ವಿನ್ಯಾಸವು ಇದರ ಬಲವಾದ ಅಂಶವಾಗಿದ್ದು, ಬ್ಯಾಟರಿ ಕೂಡ ಒಂದು ಬಲಿಷ್ಠವಾದ ಅಂಶವಾಗಿದೆ. ಟೆಕ್ನೋ ಈ ಮೊಬೈಲ್ ನ ಕ್ಯಾಮೆರಾ ಮತ್ತು ಇದರ ಸಾಮರ್ಥ್ಯವನ್ನು ಬ್ಯಾಲೆನ್ಸ್ ನಲ್ಲಿ ಇಟ್ಟಿದೆ.
ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇದು ತನ್ನದೇ ಆದ ಸ್ಥಾನವನ್ನು ಕ್ರಮಿಸಲು ನಿಂತಿದೆ. ಟೆಕ್ನೋ ನ ಈ ಪ್ರಯತ್ನವು ಟೆಕ್ನೋ ದಲ್ಲಿ ಬರುತ್ತಿರುವ ಹೊಸ ಮೊಬೈಲ್ ನಲ್ಲಿ ಕಾಣಬಹುದಾಗಿದೆ. ಟೆಕ್ನೋ ನ 2-3 ವರ್ಷಗಳ ಹಿಂದಿನ ಮೊಬೈಲ್ ಗಳನ್ನು ಮೆಲುಕು ಹಾಕಿ ನೋಡಿದಾಗ ಹಿಂದಿನ ಮತ್ತು ಇವತ್ತಿನ ಮೊಬೈಲ್ ಗಳಲ್ಲಿ ತುಂಬಾ ವ್ಯತ್ಯಾಸಗಳು ಕಂಡುಬರುತ್ತವೆ.
ಯಾರಿಗಾಗಿ ವಿನ್ಯಾಸ, ಡಿಸ್ಪ್ಲೇ ಮತ್ತು ಬ್ಯಾಟರಿಗಳು ಮಹತ್ವದ್ದಾಗಿದೆ ಅಂತಹವರಿಗೆ ಟೆಕ್ನೋ ನ ಈ ಹೊಸ ಮೊಬೈಲ್ ಅನ್ನು ಪರಿಚಯಿಸಲಾಗಿದೆ.