ಐಟಿ ನಂತರ ಕರ್ನಾಟಕದ ಹೊಸ ಶಕ್ತಿ – ಜೈವಿಕ ಆರ್ಥಿಕತೆ

ಐಟಿ ನಂತರ ಕರ್ನಾಟಕದ ಹೊಸ ಶಕ್ತಿ – ಜೈವಿಕ ಆರ್ಥಿಕತೆ ಯು ದಾಪುಗಾಲು ಹಾಕಿದೆ. ನಮ್ಮ ರಾಜ್ಯ ಅಂದರೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಅತ್ಯಂತ ಹೆಸರುವಾಸಿಯಾಗಿದೆ. ಪ್ರಮುಖವಾಗಿ ಐಟಿ ಕಂಪನಿಗಳು, ಇನ್ಫಾರ್ಮಶನ್ ,ಸಾಫ್ಟ್ವೇರ್ ಕೋಡಿಂಗ್, ಸಿಲಿಕಾನ್ ವ್ಯಾಲಿ ಇದೇ ನಮ್ಮ ಬೆಂಗಳೂರು.

ಆದರೆ ಕರ್ನಾಟಕದಿಂದ ಒಂದು ಹೊಸ ಕ್ಷೇತ್ರ ಶೀಘ್ರ ಗತಿಯಲ್ಲಿ ಬೆಳೆಯುತ್ತಾ ಇದ್ದು ದೊಡ್ಡ ಮಟದಲ್ಲಿ ಬೆಳೆದು ಹೊರಹಮ್ಮುತ್ತಿದೆ. ಸದ್ದಿಲ್ಲದೆ ಸುದ್ದಿಯನ್ನು ಮಾಡುತ್ತಿದೆ ಈ ಕ್ಷೇತ್ರ ಯಾರಿಗೂ ತಿಳಿಯದೆ ಬೆಳೆದು ಈ ಕ್ಷೇತ್ರ ಕರ್ನಾಟಕದ ನಾಯಕವಾಗಿದೆ. ಈಗ ಬಿಲಿಯನ್ ಕಿಂತಲೂ ಹೆಚ್ಚು ವ್ಯಾಪಾರ ಮಾಡುತ್ತಿದೆ. ಕರ್ನಾಟಕದ ಜಿಡಿಪಿಗೆ ತನ್ನದೇ ಆದ ಶೇಕಡ ಹತ್ತರಷ್ಟು ಕೊಡುಗೆ ನೀಡಿ ಹೆಮ್ಮರವಾಗಿ ಬೆಳೆದಿದೆ ಅದುವೇ ಜೈವಿಕ ಆರ್ಥಿಕತೆ ( Bio economy)

ಇತ್ತೀಚಿಗೆ ಹೊರಡಿಸಿದ ವರದಿಯ ಪ್ರಕಾರ ಕರ್ನಾಟಕದ ಜೈವಿಕ ಆರ್ಥಿಕತೆ ಬರೋಬ್ಬರಿ 39.21 ಡಾಲರ್ ಮಿಲಿಯನ್ ದಾಟಿ ಹೋಗಿದೆ. ಇದು ಕೇವಲ ಒಂದು ಸಣ್ಣ ಸಂಖ್ಯೆಯನ್ನು ಹಾಗೂ ಚಿಕ್ಕ ಬೆಳವಣಿಗೆಯಲ್ಲ. ಇದು ಎರಡು ವರ್ಷದಲ್ಲಿ ಅಂದರೆ 2023 2024ರ ಒಳಗಡೆ ಈ ಕ್ಷೇತ್ರ ಬರೋಬ್ಬರಿ 26.5% ರಷ್ಟು ಬೃಹತ್ ಆಗಿ ಜಿಗಿತವನ್ನು ಕಂಡಿದೆ.

ಇದು ಬೆಳೆಯುತ್ತಿರುವ ಗತಿ ಎಷ್ಟಿದೆ ಅಂದರೆ ಕರ್ನಾಟಕಕ್ಕೆ ಇದು 10.51% ಕೊಡುಗೆಯನ್ನು ನೀಡಿದೆ. ಹಾಗಾದರೆ ಏನಿದು ಜೈವಿಕ ಆರ್ಥಿಕತೆ? ಇದರಿಂದ ಆಗುವ ಪ್ರಯೋಜನವೇನು? ದಿಡೀರ್ ಆಗಿ ಇದು ಇಷ್ಟು ಮಟ್ಟ ದೊಡ್ಡದಾಗಿ ಬೆಳವಣಿಗೆ ಹೊಂದಿದ್ದು ಹೇಗೆ? ಕೇವಲ ಲ್ಯಾಬ್ ಗಳಲ್ಲಿ ನಡೆಯುತ್ತಿದ್ದ ಸಂಶೋಧನೆ ಈಗ ಕಾರ್ಖಾನೆಗಳಿಗೂ ಬಂದಿದ್ದು ಹೇಗೆ? ಈ ತಂತ್ರಜ್ಞಾನದಿಂದ ನಮ್ಮ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಇದರಿಂದ ಹೇಗೆ ಲಾಭದ ಇರುತ್ತದೆ ತಿಳಿಯಬೇಕಾದ ವಿಷಯಗಳು.

ಸಾಮಾನ್ಯ ಅರ್ಥದಲ್ಲಿ ನೋಡುವುದಾದರೆ ಜೈವಿಕ ಆರ್ಥಿಕತೆ ಎಂದರೆ ನಿಸರ್ಗದಲ್ಲಿ ದೊರೆಯುವ ನೈಸರ್ಗಿಕ ಸಂಪನ್ಮೂಲಗಳನ್ನು ಅಂದರೆ ಬಯೋಲಾಜಿಕಲ್ ಸಂಪನ್ಮೂಲಗಳನ್ನು ಬಳಸಿ ತಂತ್ರಜ್ಞಾನದ ಮೂಲಕ ನಮ್ಮ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಾಗಿದೆ.

ಇದರಲ್ಲಿ ಪ್ರಮುಖವಾಗಿ ಮೂರು ವಿಭಾಗಗಳಿವೆ

1) Health tech or bio Pharma: ಜೀವ ಉಳಿಸುವ ಔಷಧ ಮತ್ತು ಲಸಿಕೆಗಳ ತಯಾರಿಕೆ

2) Bio agri : ರೈತರಿಗೆ ಅನಸಹಾಯ ಮಾಡುವ ಇಳುವರಿ ಹೆಚ್ಚಿಸುವ ಕೃಷಿ ತಂತ್ರಜ್ಞಾನ.

3) Bio industrial: ಪಳಯುಳಿಕೆ ಇಂಧನದ ಪರ್ಯಾಯವಾಗಿ ಜೈವಿಕ ಇಂಧನ ತಯಾರಿಕೆ ಮತ್ತು ರಾಸಾಯನಿಕ ಮುಕ್ತ ಉತ್ಪಾದನೆ.

ಇಲ್ಲಿ ಗಮನಿಸಬೇಕಾದ ವಿಷಯದಲ್ಲಿ ಈ ಮೂರು ವಿಧಗಳಲ್ಲಿ ಬಯೋ ಫಾರ್ಮ ನಮ್ಮ ರಾಜ್ಯದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಇದರ ಮೌಲ್ಯ 16.44 ಡಾಲರ್ ಬಿಲಿಯನ್ ಆಗಿದೆ. ಅಂದರೆ ಶೇಕಡ 42 ಬಯೋ ಫಾರ್ಮ ವಲಯದಾಗಿದೆ.

ಇದರೊಂದಿಗೆ ಬಯೋ ಇಂಡಸ್ಟ್ರಿಯಲ್ ವಲಯ 11.44 ಡಾಲರ್ ಬಿಲಿಯನ್ ಕೊಡುಗೆ ನೀಡುತ್ತಿದೆ. ಮೊದಲು ಬಯೋಟೆಕ್ ಕೇವಲ ಲ್ಯಾಬ್ ಗಳಿಗೆ ಮಾತ್ರ ಸೀಮಿತವಾಗಿತ್ತು. ವಿಜ್ಞಾನಗಳು ಸಂಶೋಧನೆ ಮಾಡುತ್ತಾ ಇದ್ದರು. ಆದರೆ ಕರ್ನಾಟಕದಲ್ಲಿ ಲ್ಯಾಬ್ ನಿಂದ ಬಯೋಟೆಕ್ ಈಗ ಪೂರ್ವ ಪ್ರಮಾಣದಲ್ಲಿ ಉತ್ಪಾದನೆಗೂ ಇಳಿದಿದೆ. ಅಂದರೆ ಫುಲ್ ಸ್ಕೇಲ್ ಬಯೋ ಫ್ಯಾಕ್ಟರಿಂಗ್ ಶುರುವಾಗಿದೆ. ಅಂದರೆ ನಮ್ಮಲ್ಲಿ ಉತ್ಪನ್ನ ಉತ್ಪಾದಿಸಿ ಮಾರುಕಟ್ಟೆಗೆ ತರಲಾಗುತ್ತಿದೆ. ಇದೆ 26.05% ಬೃಹತ್ ಬೆಳವಣಿಗೆಯ ಹಿಂದಿನ ಅಸಲಿ ರಹಸ್ಯ.

ಇದರ ಉತ್ತಮ ಉದಾಹರಣೆಯೆಂದರೆ ನಮ್ಮ ರಾಜ್ಯದ ಕಂಪನಿ ಯಾದ Kiran Mazumdar shaw ರವರ Biocon ಒಂದು ಕಾಲದ ಸಂದರ್ಭದಲ್ಲಿ ಇನ್ಸುಲಿನ್ ಸಂಶೋಧನೆ ಮಾಡುತ್ತಿದ್ದ ಈ ಕಂಪನಿ ಈಗ ಜಾಗತಿಕ ಮಟ್ಟದಲ್ಲಿ BIOSIMILARS ಔಷಧಿಯನ್ನು ತಯಾರಿಸಿ ರಫ್ತು ಮಾಡುತ್ತಿದೆ.

BIOSIMILARS ಎಂದರೆ ಸಾಮಾನ್ಯವಾಗಿ ಹೇಳುವುದಾದರೆ ಕ್ಯಾನ್ಸರ್ ನಂತಹ ದೊಡ್ಡ ದೊಡ್ಡ ಕಾಯಿಲೆಗಳಿಗೆ ಬಳಸುವಂತಹ ಔಷಧಿಗಳು ಬಹಳ ದುಬಾರಿಯಾಗಿ ದೊರೆಯುತ್ತದೆ. ಇಂತಹ ಔಷಧಗಳನ್ನು ಸಾಮಾನ್ಯ ಜನರಿಗೆ ಕೊಂಡುಕೊಳ್ಳಲು ಕಷ್ಟವಾಗುತ್ತದೆ. ಅಂತಹ ಮೂಲ ಔಷಧಿಗಳಷ್ಟೇ ಶಕ್ತಿಯುತ, ಬಹಳ ಅಗಲವಾದ ಜೊತೆಗೆ ಸಾರ್ವತ್ರಿಕ ಪ್ರತಿ ಯನ್ನು ಹೊಂದಿರುವ ಔಷಧಿಯನ್ನು BIOSIMILARS ಎಂದು ಕರೆಯಲಾಗಿದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ಸಿಗಲು ಸಹಾಯಕವಾಗಿದೆ.

ಅದೇ ರೀತಿ SYNGENE ನಂತಹ ಕಂಪನಿಗಳು ಕಾಂಟ್ರಾಕ್ಟ್ ರಿಸರ್ಚ್ ಮಾಡುವುದನ್ನು ಬಿಟ್ಟು ಈಗ ಬಯೋ ಕಮರ್ಷಿಯಲ್ ಉತ್ಪಾದನಾ ಘಟಕಗಳನ್ನು ಶುರು ಮಾಡಿದೆ.

ಜೀವನಕ್ಕೆ ಪ್ರಯೋಗಾಲಯ: ಇದರಿಂದ ಜನಸಾಮಾನ್ಯರಿಗೆ ಸಿಕ್ಕಿದ್ದೇನು?

1) ಕೃಷಿ ವಲಯ: ಈ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಿ ದೊಡ್ಡ ಕ್ರಾಂತಿಯನ್ನು ಮಾಡಬಹುದು. ಉದಾಹರಣೆಗೆ ಉತ್ತರ ಕರ್ನಾಟಕದ ಈ ಭಾಗದಲ್ಲಿ ಬಿಟಿ ಹತ್ತಿ ಉತ್ಪಾದನೆ ಅಗ್ರಿ ಬಯೋಟೆಕ್ ಅತಿ ದೊಡ್ಡ ವರ್ಧಕವಾಗಿದೆ. ಒಂದು ಕಾಲದಲ್ಲಿ ಹುಳುಗಳಿಂದ ಹಾಳಾಗುತ್ತಿದ್ದ ಹತ್ತಿಗಳಿಗೆ ಈಗ ಈ ಬಯೋಟೆಕ್ ರಕ್ಷಣೆ ನೀಡುತ್ತಿದೆ. ಇಳುವರಿ ಪ್ರಮಾಣ ಕೂಡ ಹೆಚ್ಚಾಗಿದೆ.

ಒಂದು ವರದಿಯ ಪ್ರಕಾರ ಈ ತಂತ್ರಜ್ಞಾನವನ್ನು ಬಳಸಿಕೊಂಡಾಗಲೂ ಕೂಡ ಕೆಲವು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಗುಲಾಬಿ ಕಾಯಿ, ಗುಲಾಬಿ ಹೊಸ ಕೀಟಗಳು ಶುರುವಾಗಿವೆ. ಇದಕ್ಕೆ ಕೇವಲ ತಂತ್ರಜ್ಞಾನ ಮಾತ್ರ ಕಾರಣವಲ್ಲ ಸರಿಯಾದ ಬೀಜ ನಿರ್ವಹಣೆಯ ಅಗತ್ಯವಿದೆ. ಜೊತೆಗೆ ಹವಾಮಾನ ವೈಪರಿತ್ಯ ಒಂದು ತಲೆ ನೋವಾಗಿ ಕಾಡುತ್ತಿದೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಮತ್ತು ಅಲ್ಲಿನ ವಿಜ್ಞಾನಿಗಳು ಕಡಿಮೆ ನೀರಿನಲ್ಲಿಯೂ ಬೆಳೆಯುವ ಬರಗಾಲವನ್ನು ತಡೆದುಕೊಳ್ಳುವ ಹೊಸ ರೀತಿಯ ರಾಗಿ ಮತ್ತು ಜೋಳಗಳನ್ನು ಡೆವೆಲಪ್ ಮಾಡುತ್ತಿದ್ದಾರೆ. ಭವಿಷ್ಯತ್ತಿನಲ್ಲಿ ಇದು ಕೃಷಿಗೆ ನೀಡುವ ವರ್ಧಕವಾಗಿದೆ.

2) Health tech and ಔಷಧಿ ತಯಾರಿಕೆ: ಇವತ್ತು ಕ್ಯಾನ್ಸರ್ ಮತ್ತು ಸೂಕ್ಷ್ಮಜೀವಿ ನಿರೋಧಕ ಶಕ್ತಿ (amr) ನಂತಹ ಗಂಭೀರ ಸಮಸ್ಯೆಗಳಿಗೆ ನಮ್ಮದೇ ರಾಜ್ಯದ startup ಗಳು ಮುಂಚೂಣಿಯಲ್ಲಿವೆ .

ಉದಾಹರಣೆಗೆ: ಬೆಂಗಳೂರಿನ CRISPR BITS ಕಂಪನಿಗಳು ವಂಶವಾಹಿನಿ ಮಟ್ಟದಲ್ಲಿರುವ ರೋಗಗಳನ್ನು ಪತ್ತೆ ಹಚ್ಚಿCRISPR diagnostics ತಂತ್ರಜ್ಞಾನದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಇದೊಂದು ರೋಗ ಮೂಲವನ್ನು ಪತ್ತೆ ಹಚ್ಚಿ, ಜಿನ್ಸ ಅಲ್ಲಿ ಯಾವ ಕಾಯಿಲೆಗೆ ಅಧಿಕವಾಗಿ ಒಳಪಡುವವರು ಎಂಬುದನ್ನು ಪತ್ತೆ ಹಚ್ಚಿ ತಿದ್ದುವ ತಂತ್ರಜ್ಞಾನವನ್ನು ಇದು ಒಳಗೊಂಡಿದೆ.

ಇನ್ನೊಂದೆಡೆ ACHIRA lab ಗಳಂತಹ ಕಂಪನಿಗಳು ದೊಡ್ಡ ದೊಡ್ಡ ಲ್ಯಾಬ್ಗಳಲ್ಲಿ ದೊಡ್ಡ ದೊಡ್ಡ ಮಷೀನ್ ಗಳಲ್ಲಿ ಮಾಡಲಾಗುವ ರಕ್ತ ಪರೀಕ್ಷೆಯನ್ನು ಕೇವಲ ಒಂದು ಚಿಪ ಮೇಲೆ ಮಾಡುವ ತಂತ್ರಜ್ಞಾನವನ್ನು ಇದು ತಂದಿದೆ. ಇದನ್ನು Lab on chip ಎಂದು ಕರೆಯಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ರಿಪೋರ್ಟ್ ಬಹುಬೇಗ ಸಿಗುತ್ತದೆ. ಚಿಕಿತ್ಸೆ ಕೂಡ ಬೇಗ ಶುರುವಾಗುತ್ತದೆ ಇದೇ ಇದರ ಪ್ರಮುಖ ಪರಿಣಾಮ.

ಬೆಂಗಳೂರಿನಲ್ಲಿ ಮಾತ್ರವಲ್ಲದೆ ವಿವಿಧ ಊರುಗಳಲ್ಲಿ ಇದರ ಕ್ರಾಂತಿ ಕಾಣಬಹುದಾಗಿದೆ. 1451 ಕಂಪನಿಗಳು ಸಕ್ರಿಯವಾಗಿ ಕೆಲಸ ಮಾಡುತ್ತೀವೆ. 2025 ರಲ್ಲಿ 218 startup ಗಳು ಶುರುವಾಗಿವೆ. ಜಗತ್ತಿನ ಇತರೆ startup ಗಳಿಗಿಂತ ನಮ್ಮ ರಾಜ್ಯ ಬೇಗ ಕೆಲಸ ಶುರು ಮಾಡಿದೆ ಅದು ಕೂಡ ಎಐ ನ ಸದ್ಬಳಕೆಯಿಂದ.

ಲ್ಯಾಬ್ಗಳಲ್ಲಿ ಪ್ರೋಟೀನ್ ಗಳನ್ನು ಹೆಚ್ಚಿಸುವ ಮತ್ತು ಮಣ್ಣಿನ ಇಳುವರಿಯ ಗುಣಮಟ್ಟವನ್ನು ಹೆಚ್ಚಿಸುವ ಜೈವಿಕ ಗೊಬ್ಬರ ಕೂಡ ತಯಾರಿಸುತ್ತಿದ್ದಾರೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ biotech ವಲಯ ಬೇರೆ ಕಡೆಗೂ ಹಮ್ಮುತ್ತಿದೆ.

ಮೈಸೂರಿನ INIYA BIOPROBES ನಂತಹ ಸ್ಥಳೀಯ ಬೆಂಬಲ ಪಡೆದು ಜಾಗತಿಕ ಮಟ್ಟದಲ್ಲಿ ಉತ್ಪಾದನೆಯನ್ನು ಇದು ಮಾಡುತ್ತಿದೆ.

3) Bio industrial: ಜಾಗತಿಕ ಮಟ್ಟದಲ್ಲಿ ಕೂಡ ಜೈವಿಕ ತಂತ್ರಜ್ಞಾನ ಕ್ಕೆ ಅಧಿಕವಾದ ಹೂಡಿಕೆಗಳು ಬರುತ್ತಿವೆ. ಈ ಹೂಡಿಕೆಯಿಂದ ಬರುವ ಹಣ bugwork research ಎಂಬ ಕಂಪನಿ ಮಾನವನಿಗೆ ಮಾರಕವಾಗಿರುವ ಹೊಸ ಬ್ಯಾಕ್ಟರಿಯಗಳನ್ನು ಹುಡುಕಿ ಸಾಯಿಸುವ ಹೊಸ ಆಂಟಿಬಯೋಟಿಕ್ ಅನ್ನು ಇವರು ಕಂಡುಹಿಡಿಯುತ್ತಿದ್ದಾರೆ.

Pandorum technologies ಮಾನವನ ಅಂಗಾಂಗಗಳನ್ನು ಕೃತಕವಾಗಿ tissue engineering ಮಾಡುವ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ವಿದೇಶಿ ಹೂಡಿಕೆಯು ಸಿಗುತ್ತಿದೆ ಹಾಗೂ ಸಿ ಕ್ಯಾಂಪ್ ಎಂಬ ಸಂಸ್ಥೆ ಇದೆ ಸರ್ಕಾರ ಇವುಗಳಿಗೆ ಸಹಾಯ ಮಾಡುತ್ತಿವೆ.

ದೇಶಕ್ಕೆ ಕರ್ನಾಟಕ ಮಾದರಿಯಾಗಿದ್ದು ದೇಶಕ್ಕೆ ಇದರ ಕೊಡುಗೆ 21%. ಐ ಟಿ ಕ್ಷೇತ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಕರ್ನಾಟಕ ಈಗ ಜೈವಿಕ ತಂತ್ರಜ್ಞಾನದಲ್ಲಿಯೂ ಕೂಡ ದೊಡ್ಡ ನಾಯಕನಾಗಿ ಹೊರಹೊಮ್ಮುತ್ತಿದೆ.

ಭವಿಷ್ಯದಲ್ಲಿ ಒಂದು ವೇಳೆ ಸರ್ಕಾರ ಇದಕ್ಕೆ ತನ್ನ ಬೆಂಬಲ ನೀಡುವ ಮೂಲಕ ಸಹಾಯ ನೀಡಿದರೆ 2030 ಹೊತ್ತಿಗೆ ತನ್ನ ಛಾಪೆಯನ್ನು ಮೂಡಿಸುವ ಸಾಧ್ಯತೆ ಇದೆ.