ಡಿಜಿಟಲ್ ಜನಗಣತಿ

ಪೆನ್ ಮತ್ತು ಪೇಪರ್ ಇಲ್ಲದೆ ಮೊದಲ ಬಾರಿಗೆ ಡಿಜಿಟಲ್ ಜನಗಣತಿ 

ಮೊದಲಿಗೆ ಜನಗಣತಿ ಎಂದರೆ ಒಂದು ರಾಷ್ಟ್ರ ದಲ್ಲಿ ಅಥವಾ ರಾಜ್ಯದಲ್ಲಿ ಇರುವ ಜನರನ್ನು ಅವರ ಜಾತಿ, ಜನಾಂಗದ ಆಧಾರದಿಂದ ವಿಂಗಡಿಸಿ , ಅವರಿಗಿರುವ ದಾಖಲೆಗಳನ್ನು ಸರ್ಕಾರದ ಕಡತದಲ್ಲಿ ನಮೂದಿಸುವ ಪ್ರಕ್ರಿಯೆ ಆಗಿದೆ. ಇದರಿಂದ ವ್ಯಕ್ತಿಯು ಸ್ವಾಂತಂತ್ರ್ಯ ಹಾಗೂ ಸಾಮಾಜಿಕ ಹಕ್ಕುಗಳಿಗೆ ಬದ್ಧನಾಗುತ್ತಾನೆ.

ಭಾರತದಲ್ಲಿ ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ಪ್ರಾರಂಭವಾಗಿದ್ದು ಇತಿಹಾಸ ವನ್ನು ಸೃಷ್ಟಿಸಲು ಮುಂದಾಗಿದೆ. ಇದೀಗ ಗಣತಿದಾರರು ಮನೆ ಮನೆಗೆ ಹೋಗಿ ಪೆನ್ ಮತ್ತು ಪೇಪರ್ ಹಿಡಿದು ಮಾಹಿತಿಯನ್ನು ಕಲೆ ಹಾಕುವ ಬದಲು ಮೊಬೈಲ್ ಅಥವಾ ಟ್ಯಾಬ್ ಗಳ ಮೂಲಕ ಸಾರ್ವಜನಿಕರ ಮಾಹಿತಿಯನ್ನು ಕಲೆ ಹಾಕಿ ಗಣತಿ ಮಾಡಲಿದ್ದಾರೆ.

ಭಾರತದ ಜನಗಣತಿ ಹಿನ್ನೆಲೆಯನ್ನು ನೋಡುವುದಾದರೆ ಭಾರತದಲ್ಲಿ ಜನಗಣತಿಯು 1872 ರಲ್ಲಿ ಮೊದಲ ಬಾರಿಗೆ ಲಾರ್ಡ್ ಮೇಯೊ ನ ಅವಧಿಯಲ್ಲಿ ಆರಂಭವಾಗಿ 1881 ರಿಂದ ಪ್ರತಿ 10 ವರ್ಷಗಳಿಗೊಮ್ಮೆ ನಿರಂತರವಾಗಿ ನಡೆಯುತ್ತಿರುವ ವಿಶ್ವದ ಅತಿ ದೊಡ್ಡ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಗೃಹ ಸಚಿವಾಲಯದ ಅಡಿಯಲ್ಲಿ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸೆಸ್ ಕಮಿಷನರ್ ಕಚೇರಿ ಇದನ್ನು ನಡೆಸುತ್ತಿದೆ. 1948 ರ ಜನಗಣತಿ ಕಾಯಿದೆಯ ಅಡಿಯಲ್ಲಿ ನಡೆಯುವ ಈ ಪ್ರಕ್ರಿಯೆಯು ಜನಸಂಖ್ಯೆ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ದತ್ತಾಂಶಗಳನ್ನು ಒದಗಿಸುತ್ತದೆ.

1872 ರಲ್ಲಿ ಮೊದಲ ಜನಗಣತಿ ನಡೆದರು, ಮೊದಲ ಸಮಕಾಲಿನ ಅಥವಾ ಏಕಕಾಲದ ಜನಗಣತಿಯು 1881 ರಲ್ಲಿ ನಡೆಯಿತು.

ಭಾರತ ಸ್ವಾತಂತ್ರ್ಯದ ನಂತರ 1951 ರ ಜನಗಣತಿಯು ಸ್ವತಂತ್ರ ಭಾರತದ ಮೊದಲ ಜನಗಣತಿಯಾಗಿತ್ತು ಇದನ್ನು 1948 ರ ಜನಗಣತಿ ಕಾಯಿದೆಯ ಅಡಿಯಲ್ಲಿ ನಡೆಸಲಾಯಿತು.

1881 ರಿಂದ 2011 ರ ವರೆಗೆ 15 ಬಾರಿ ಪ್ರತಿ 10 ವರ್ಷಗಳಿಗೊಮ್ಮೆ ಯಾವುದೇ ಅಡಚಣೆ ಇಲ್ಲದೆ ಜನಗಣತಿ ನಡೆಸಲಾಗಿದೆ.

ಆದರೆ 2021 ರ ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ನಡೆಯಬೇಕಿದ್ದ 16ನೇ ಜನಗಣತಿಯನ್ನು ಮುಂದೂಡಲಾಗಿತ್ತು. ಮುಂದಿನ ಜನಗಣತಿ 2027ರಲ್ಲಿ ನಡೆಯಲಿರುವ ಜನಗಣತಿಯು ಭಾರತದ ಮೊದಲ ಡಿಜಿಟಲ್ ಜನಗಣತಿಯಾಗಿದ್ದು ಇದಕ್ಕಾಗಿ 11,718 ಕೋಟಿ ಅನುದಾನವನ್ನು ಒಪ್ಪಿಗೆ ನೀಡಲಾಗಿದೆ.

ಜನಗಣತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. 

1) ಮನೆ ಪಟ್ಟಿ (ಹೌಸಿಂಗ್ ಲಿಸ್ಟಿಂಗ್)

2) ಜನಸಂಖ್ಯೆ ಎಣಿಕೆ

1948ರ ಜನಗಣತಿ ಕಾಯ್ದೆಯು ನಾಗರಿಕರು ನಿಖರವಾದ ಮಾಹಿತಿಯನ್ನು ನೀಡುವುದನ್ನು ಕಡ್ಡಾಯಗೊಳಿಸಿ ಮತ್ತು ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡುತ್ತದೆ.

ಇದರ ಮುಖ್ಯ ಉದ್ದೇಶ ಆರೋಗ್ಯ ಶಿಕ್ಷಣ ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಹಂಚಿಕೆಗೆ ನಿಖರವಾದ ದತ್ತಾಂಶಗಳನ್ನು ಒದಗಿಸುವುದು.

ಡಿಜಿಟಲ್ ಜನಗಣತಿ ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ನಡೆಯಲಿದ್ದು ನಮ್ಮ ಕರ್ನಾಟಕ ದಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15 ರ ವರೆಗೆ ಡಿಜಿಟಲ್ ಜನಗಣತಿ ನಡೆಯಲಿದೆ.

ಕೇಂದ್ರ ಸರ್ಕಾರ ಈ ಬಾರಿಗೆ ಗಣತಿದಾರರ ಹೊರೆಯನ್ನು ಕಡಿಮೆ ಮಾಡಲು ಸಾರ್ವಜನಿಕರು ಸ್ವ ಗಣತಿ ಅಂದರೆ ತಾವೇ ಕೇಂದ್ರ ಸರ್ಕಾರ ನೀಡಿರುವ ವೆಬ್ ಸೈಟ್ ಗೆ ಹೋಗಿ ತಮ್ಮ ಮಾಹಿತಿಯನ್ನು ನೀಡಬಹುದಾಗಿದೆ.

Se.census.gov.in ವೆಬ್ಸೈಟ್ ಗೆ ನಿಮ್ಮ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ ಸೆನ್ಸಸ್ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನಿಮ್ಮ ಮಾಹಿತಿಯನ್ನು ನೀಡಬಹುದಾಗಿದೆ.

16 ವರ್ಷಗಳ ನಂತರ ನಡೆಯುತ್ತಿರುವ ಈ ಜನಗಣತಿಗೆ ಯಾವುದೇ ರೀತಿಯ ದಾಖಲೆಗಳು ಅಗತ್ಯವಿಲ್ಲ ಕೇವಲ ಗಣತಿ ದಾರರು ಮೊಬೈಲ್ ಅಥವಾ ಟ್ಯಾಬ್ ಗಳ ಮೂಲಕ ಮನೆ ಮನೆಗೆ ತೆರಳಿ ಸಾರಜನಿಕರ ಮಾಹಿತಿಯನ್ನು ಕಲೆ ಹಾಕಬಹುದಾಗಿದೆ ಎಂದು ಭಾರತದ ರಿಜಿಸ್ಟ್ರಲ್ ಜನರಲ್ ಮತ್ತು ಜನಗಣತಿ ಆಯುಕ್ತರದ ಮೃತ್ಯುಂಜಯ ಕುಮಾರ್ ನಾರಾಯಣ್ ಈ ರೀತಿ ಮಾಹಿತಿ ನೀಡಿದ್ದಾರೆ.

ಮೊದಲೇ ತಿಳಿಸಿದಂತೆ ಜನಗಣತಿ ಎರಡು ಹಂತದಲ್ಲಿ ನಡೆಯಲಿದ್ದು

ಮೊದಲನೇ ಹಂತದಲ್ಲಿ house listing ಮತ್ತು housing census ಮೂಲಕ ನಡೆಯಲಿದ್ದು ಎಪ್ರಿಲ್ ರಿಂದ ಸೆಪ್ಟೆಂಬರ್ ತನಕ ಆಯಾ ರಾಜ್ಯಗಳಿಗೆ 30 ದಿನಗಳ ಅವಧಿಯವರೆಗೆ ನಡೆಯುತ್ತದೆ.

ಎರಡನೇ ಹಂತ population enumeration ಅಂದರೆ ಜನಸಂಖ್ಯಾ ಎಣಿಕೆ ಫೆಬ್ರುವರಿ 2027ರಲ್ಲಿ ನಡೆಯಲಿದೆ ಆದರೆ ಲಡಾಕ್ ಮತ್ತು ಹಿಮಪಾತವಿರುವ ಕೆಲವು ಭಾಗಗಳಲ್ಲಿ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡನೇ ಹಂತವನ್ನು ಮಾಡಲಿದ್ದಾರೆ.

ಮೊದಲನೇ ಹಂತದಲ್ಲಿ 33 ಪ್ರಶ್ನೆಗಳಿದ್ದು 4 ಭಾಗಗಳಲ್ಲಿ ವಿಂಗಡಣೆ ಮಾಡಲಾಗಿದೆ. ಸಾರ್ವಜನಿಕರಿಗೆ ತಮ್ಮ ಮಾಹಿತಿಯನ್ನು ಸ್ವ ಗಣತಿಯನ್ನು ತಾವೇ ಮಾಡಿಕೊಳ್ಳಲು ಅನುಕೂಲವಾಗಲೆಂದು ಸರ್ಕಾರವು 16 ಭಾಷೆಗಳನ್ನು ಅಳವಡಿಸಿದೆ. ಇದರಿಂದ ಕೇವಲ 15 ರಿಂದ 20 ನಿಮಿಷಗಳಲ್ಲಿ ಮಾಹಿತಿಯನ್ನು ನೀಡಬಹುದಾಗಿದೆ ಅಥವಾ ನೀಡಿದ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ.

 

Step 1

ಮೊದಲಿಗೆ se.census.gov.in website ಗೆ ಲಾಗಿನ್ ಆಗುವ ಮೂಲಕ ಈ ಕೆಳಗೆ ನೀಡಲಾದ 4 ವಿಭಾಗಗಳಲ್ಲಿ ವಿಂಗಡಿಸಿದ 33 ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ.

 

Step 2

ಭಾಗ 1 ವಸತಿ ವಿವರಗಳು

1) ಕಟ್ಟಡದ ಸಂಖ್ಯೆ

2) ಜನಗಣತಿ ಮನೆ ಸಂಖ್ಯೆ

3) ನೆಲಕ್ಕೆ ಬಳಸಿರುವ ವಸ್ತು

4) ಗೋಡೆಗೆ ಬಳಸಿರುವ ವಸ್ತು

5) ಛಾವಣಿಗೆ ಬಳಸಿರುವ ವಸ್ತು

6) ಮನೆಯ ನಿರ್ದಿಷ್ಟ ಬಳಕೆ ಖಚಿತ

7) ಜನಗಣತಿ ಮನೆಯ ಸ್ಥಿತಿ

8) ಮನೆಯ ಸಂಖ್ಯೆ

 

ಭಾಗ 2 ಮನೆಯ ಸಂಯೋಜನೆ

9) ಮನೆಯಲ್ಲಿ ವಾಸಿಸುವ ಒಟ್ಟು ವ್ಯಕ್ತಿಗಳ ಸಂಖ್ಯೆ

10) ಮನೆಯ ಮುಖ್ಯಸ್ಥರ ಹೆಸರು

11) ಮನೆಯ ಮುಖ್ಯಸ್ಥರ ಲಿಂಗ

12) sc/st/ ಇತರರಿಗೆ ಸೇರಿದೆಯೇ

13) ಮನೆಯ ಮಾಲಿಕತ್ವದ ಸ್ಥಿತಿ

14) ಪ್ರತ್ಯೇಕವಾಗಿ ವಾಸದ ಕೋಠಡಿಗಳ ಸಂಖ್ಯೆ

15) ಮನೆಯಲ್ಲಿನ ವಿವಾಹಿತ ದಂಪತಿಗಳ ಸಂಖ್ಯೆ

 

ಭಾಗ 3 ಸೌಕರ್ಯಗಳು ಮತ್ತು ನೈರ್ಮಲ್ಯ 

16) ಕುಡಿಯುವ ನೀರಿನ ಮುಖ್ಯ ಮೂಲ

17) ಕುಡಿಯುವ ನೀರಿನ ಮೂಲ ಲಭ್ಯತೆ

18) ಬೆಳಕಿನ ಮುಖ್ಯ ಮೂಲ

19) ಶೌಚಾಲಯಕ್ಕೆ ಪ್ರವೇಶ

20) ಶೌಚಾಲಯದ ಪ್ರಕಾರ

21) ತ್ಯಾಜ್ಯ ನೀರು ಔಟ್ಲೆಟ್

22) ಸ್ನಾನದ ಸೌಲಭ್ಯದ ಲಭ್ಯತೆ

23) ಅಡುಗೆಮನೆ ಸಂಪರ್ಕ LPG/PNG

24) ಅಡುಗೆಗೆ ಬಳಸುವ ಮುಖ್ಯ ಇಂಧನ

 

ಭಾಗ 4 ಸ್ವತ್ತುಗಳು ಮತ್ತು ಸಂಪರ್ಕ 

25) ರೇಡಿಯೋ ಅಥವಾ ಟ್ರಾನ್ಸಿಸ್ಟರ್

26) ದೂರದರ್ಶನ

27) ಇಂಟರ್ನೆಟ್ ಪ್ರವೇಶ

28) ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್

29) ದೂರವಾಣಿ ಅಥವಾ ಮೊಬೈಲ್ ಫೋನ್ ಅಥವಾ ಸ್ಮಾರ್ಟ್ ಫೋನ್

30) ಬೈಸಿಕಲ್ ಅಥವಾ ಸ್ಕೂಟರ್ ಅಥವಾ ಮೋಟರ್ ಸೈಕಲ್ ಅಥವಾ ಮೊಪೆಡ್

31) ಕಾರು ಅಥವಾ ಜೀಪ್ ಅಥವಾ ವ್ಯಾನ್

32) ಮನೆಯಲ್ಲಿ ಸೇವಿಸುವ ಪ್ರಮುಖ ಧಾನ್ಯ

33) ಮೊಬೈಲ್ ಸಂಖ್ಯೆ (ಜನಗಣತಿ ಸಂಹನಕ್ಕಾಗಿ ಮಾತ್ರ)

 

Step 3– ಮನೆಯ ಲೊಕೇಶನ್ ಅನ್ನು ಐಡೆಂಟಿಫೈ ಮಾಡಿ

 

Step 4– ಫಾರ್ಮ ಸಬ್ಮಿಟ್ ಮಾಡಿ, ಯೂನಿಕ್ SE ID ಪಡೆಯಿರಿ

 

Step 5– ಬಂದಿರುವ USE ID ಯನ್ನು ಸೇಫ್ ಆಗಿ ಇಟ್ಟುಕೊಳ್ಳಿ, ಮನೆ ಮನೆಗೆ ಗಣತಿ ಆರಂಭವಾದಾಗ ಈ ಐಡಿ ತೋರಿಸಿ.

 

ಏಪ್ರಿಲ್ 16 ರಿಂದ ಮೇ 15 ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಗಣತಿದಾರರು ಪರಿಶೀಲನೆ ಮಾಡುತ್ತಾರೆ.

 

ಕೇಂದ್ರ ಸರ್ಕಾರ ಡಾಟಾ ಭದ್ರತೆಗೆ ಡಾಟಾ ಸೆಂಟರ್ ಗಳನ್ನು critical information infrastructure ಎಂದು ಘೋಷಣೆ ಮಾಡಿದೆ. ಜನಗಣತಿ ಕಾಯಿದೆ ಸೆಕ್ಷನ್ 15ರ ಅಡಿಯ ಪ್ರಕಾರ ಸಾರ್ವಜನಿಕರ ಮಾಹಿತಿಯನ್ನು ಗೌಪ್ಯ ಾಗೂ ಆರ್‌ಟಿಐ ಅಡಿಯಲ್ಲಿ ಕೂಡ ಪಬ್ಲಿಕ್ ಮಾಡುವಂತಿಲ್ಲ ಹಾಗೂ ಯಾವುದೇ ರೀತಿಯ ಕೋರ್ಟ್ ಕಚೇರಿಗಳಲ್ಲಿ ಈ ಮಾಹಿತಿಗಳನ್ನು ಪುರಾವೆ ಗಳಂತೆ ಬಳಸುವಂತಿಲ್ಲ.

 

ಕಿವಿಮಾತು:

ಗಣತಿಯ ಸಂದರ್ಭದಲ್ಲಿ ಸಾರ್ವಜನಿಕರು ಖಚಿತವಾದ ಮಾಹಿತಿಯನ್ನು ನೀಡಿ ಸರ್ಕಾರಕ್ಕೆ ಪ್ರೋತ್ಸಾಹಿಸಿ ಏಕೆಂದರೆ ಸಾರ್ವಜನಿಕರು ನೀಡಿದ ಮಾಹಿತಿಯಿಂದಾಗಿ ಸರ್ಕಾರ ನೀಡುವ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳನ್ನು ಫಲಾನುಭವಿಗಳು ಪಡೆಯಬಹುದಾಗಿದೆ.