ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆ: ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್ ಪ್ರತಿಕ್ರಿಯೆ, ಜಾಗತಿಕ ಆತಂಕ
ಕೊನೆಗೂ ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ದೊಡ್ಡ ದಾಳಿ ನಡೆಸಿವೆ. ಇದು ಅನೇಕ ದಿನಗಳಿಂದ ಮಾಡಿದ ಯೋಜನೆಗಳ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇರಾನಿನ ರಾಜಧಾನಿ ತೆಹರನ್ ಸೇರಿದಂತೆ ಅನೇಕ ಪ್ರಮುಖ ನಗರಗಳು ಹತ್ತಿ ಉರಿಯುತ್ತಿವೆ.
ಅಮೆರಿಕ ಮತ್ತು ಇಸ್ರೇಲ್ ಇರಾನಿನ ಮೇಲೆ ಎಲ್ಲಾ ಕಡೆಯಿಂದ ದಾಳಿ ಮಾಡಿದ್ದಾರೆ. ಶನಿವಾರದ ಮೊದಲಾರ್ಧದಲ್ಲಿ ದಾಳಿ ಶುರುವಾಗಿತ್ತು. ಇಸ್ರೇಲ್ ನ ರಕ್ಷಣಾ ಸಚಿವ ಇರಾನ್ ನಮ್ಮ ಮೇಲೆ ದಾಳಿ ಮಾಡುವ ಮುನ್ಸೂಚನೆ ನಮಗೆ ಇತ್ತು ಅದಕ್ಕಾಗಿ ನಾವೇ ಮೊದಲು ದಾಳಿ ಮಾಡಿದ್ದೇವೆ ಎಂದು ತಿಳಿಸುತ್ತಾರೆ.
ಇವರ ಗುರಿ ಇರಾನಿನ ತೆಹರಾನ್, ಅಧ್ಯಕ್ಷರ ನಿವಾಸ, ಖಮೇನಿ ನ ಆಫೀಸ್, ಯೂನಿವರ್ಸಿಟಿಗಳು, ಕಾಂ ಸಿಟಿ ಗೇರ್ಮನ್ ಶಾ, ಕರಾಜ್ ಮುಂತಾದವುಗಳ ಕಡೆ ಇನ್ನು ದಾಳಿ ನಡೆಯುತ್ತಿವೆ. ಇವೆಲ್ಲವುಗಳು ಮಿಸ್ಸೈಲ್ ಕೇಂದ್ರಗಳು. ಇಸ್ಬಾನ ಇರಾನಿನ ಅತಿ ದೊಡ್ಡ ನ್ಯೂಕ್ಲಿಯರ್ ಸಂಶೋಧನಾ ಕೇಂದ್ರ. ಇವುಗಳನ್ನು ಸೇರಿಸಿ ಅಮೇರಿಕಾ ಇಸ್ರೇಲ್ ಇರಾನಿನ ಎಲ್ಲಾ ಸೈನ್ಯ ಸಾಮರ್ಥ್ಯವನ್ನು ಧ್ವಂಸ ಮಾಡುವ ಉದ್ದೇಶ ಹೊಂದಿತ್ತು.
ಟ್ರಂಪ್ ಮೊದಲೇ ಸಣ್ಣ ವಿಡಿಯೋ ಮೂಲಕ ಇರಾನಿನ ಸೇನೆಗಳಿಗೆ ಎಚ್ಚರಿಕೆ ನೀಡಿತ್ತು ನಿಮ್ಮ ಶಸ್ತ್ರಗಳನ್ನು ಕೆಳಗಿಳಿಸಿ ನಮಗೆ ಶರಣಾಗಿ ನಾವು ನಿಮಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿದ್ದರು. ಅದೇ ರೀತಿ ಇರಾನಿನ ಜನರಿಗೂ ಒಂದು ಕಡೆ ಆಫರ್ ಇನ್ನೊಂದು ಕಡೆ ವಾರ್ನಿಂಗ್ ಅನ್ನು ಕೂಡ ನೀಡಿದ್ದರು ಅದೇನೆಂದರೆ ನಮ್ಮ ಗುರಿ ಖಮೈನ್ ನ & ಅವರು ಆಡಳಿತದ ವಿರುದ್ಧ ಇದ್ದೇವೆ ಇದಕ್ಕಾಗಿ ನೀವು ಮನೆಯಿಂದ ಹೊರ ಬರಬೇಡಿ ನಾವು ಅನೇಕ ದಾಳಿ ಮಾಡಲಿದ್ದೇವೆ.
ಸ್ವಿಜರ್ಲ್ಯಾಂಡಿನ ಜಿನೆವಾದಲ್ಲಿ ಮಾತುಕತೆ ನಡೆಸಲಾಗಿತ್ತು ಆದರೆ ಅಮೇರಿಕಾದ ಯಾವುದೇ ಬೇಡಿಕೆಗಳಿಗೆ ಇರಾನ್ ಒಪ್ಪಿಗೆ ನೀಡಲಿಲ್ಲ ಅಲ್ಲಿಯ ಮಾತುಕತೆ ವಿಫಲವಾಯಿತು. ಅಮೆರಿಕಾದ ಇಂಟಲಿಜೆನ್ಸ್ ರಿಪೋರ್ಟ್ ನೀಡಿದ್ದಾರೆ ಅದೆನೆಂದರೆ ಇರಾನ್ ಶಸ್ತ್ರಾಸ್ತ್ರ ದರ್ಜೆಯ ಯುರೇನಿಯಂ ಹೊಂದಿದ್ದು ಅದು ಅಣ್ವಸ್ತ್ರ ಮಾಡಿಕೊಳ್ಳುವ ಕೊನೆಯ ಹಂತಕ್ಕೆ ಬಂದಿದೆ ಎಂದು ಸೂಚಿಸಿತ್ತು.
ಈ ವಿಷಯವನ್ನು ಅರಿತ ಅಮೆರಿಕ ಹಾಗೂ ಇಸ್ರೇಲ್ ಒಂದುಗೂಡಿ ಇರಾನ್ ಮೇಲೆ ದಾಳಿ ಮಾಡುವ ನಿರ್ಧಾರಕ್ಕೆ ಬಂದವು. ಇದರಲ್ಲಿ ಖಮೇನಿನ ಹತ್ಯೆ ಒಂದು ಪ್ರಮುಖ ಜಾಗತಿಕ ಘಟನೆಯಾಗಿದೆ. ಇವರು ಇರಾನಿನ ಸರ್ವೋಚ್ಚ ನಾಯಕ ರಾಗಿದ್ದರು ಇವರ ಹತ್ಯೆ ಚರ್ಚೆಗೀಡಾಗಿದೆ.
ಟ್ರಂಪ್: ಪ್ರಪಂಚದ ಅತಿ ದೊಡ್ಡ ರಾಕ್ಷಸನನ್ನು ನಾವು ಮುಗಿಸಿದ್ದೀವಿ ಎಂದು ಹೇಳಿದ್ದಾರೆ.
ನೆತ್ನ್ಯಾಹು: ಇಸ್ರೇಲ್ ಪ್ರಧಾನಿ ಖಮೇನಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಮಧ್ಯಪ್ರಾಚ್ಯ ರಾಜಕೀಯದಲ್ಲಿ ಅತಿ ದೊಡ್ಡ ಬೆಳವಣಿಗೆಯಾಗಿದೆ. 40 ವರ್ಷಗಳಿಂದ ಇದ್ದ ಸೇಡನ್ನು ಅಮೆರಿಕ ಮತ್ತು ಇಸ್ರೇಲ್ ಇರಾನಿನ ವಿರುದ್ಧ ತೀರಿಸಿಕೊಂಡಿದೆ. ಇರಾನ್ ಕೂಡ ಖಮೇನಿ ಹತ್ಯೆ ಸುದ್ದಿಯನ್ನು ದೃಢೀಕರಿಸಿದೆ ಹಾಗೂ 40 ದಿನಗಳ ಶೋಕಾಚರಣೆ ಮಾಡುವುದಾಗಿ ತಿಳಿಸಿದೆ.
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್ ಪ್ರತಿದಾಳಿ: ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ.
ಇರಾನ್ ತಮ್ಮ ಸರ್ವೋಚ್ಚ ನಾಯಕನನ್ನು ಕಳೆದುಕೊಂಡಿದ್ದರಿಂದಾಗಿ ಇರಾನಿನ ಸೇನೆಯು ಈಗ ಸಿಕ್ಕಸಿಕ್ಕಲ್ಲಿ ದಾಳಿ ಮಾಡಲು ಶುರು ಮಾಡಿದೆ. ಯುನೈಟೆಡ್ ಅರಬ್ ಎಮಿಟಿಸ್, ಸೌದಿ ಅರೇಬಿಯಾ, ಕತಾರ್, ಬಹರೇನ್, ಮುಂತಾದವುಗಳ ಕಡೆ ಇರಾನ್ ಸ್ಪೋಟಕಗಳನ್ನು ಮಾಡಿದೆ. ಇದರ ನಡುವೆ ಈಗ ಬ್ರಿಟನ್ ಕೂಡ ಸೇರಿದೆ. ಹಾರ್ಮುಜ್ ಜಲಸಂದಿಯನ್ನು ರದ್ದುಗೊಳಿಸಲಾಗಿದೆ.
ಇರಾನಿನ ಕೆಲವು ವರದಿಗಳ ಪ್ರಕಾರ ಖಮೇನಿ ನ ಕುಟುಂಬದ ಕೆಲವು ಸದಸ್ಯರು ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇರಾನ್ ಶಿಯಾ ಸಿದ್ದಾಂತದ ಕೇಂದ್ರ ಬಿಂದು ಎಂದು ತಿಳಿದು ಬರುತ್ತದೆ.
1979 ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್, ಶಿಯಾ ಪಂಗಡದ ಏಕೈಕ ನಾಯಕವಾಗಿತ್ತು. ಏಕೆಂದರೆ ಶಿಯಾ ಧಾರ್ಮಿಕ ಆಡಳಿತ ಅಲ್ಲಿಗೆ ಬಂದಿತ್ತು. ಖಮೇನಿ ಕೇವಲ ಇರಾನ್ ದೇಶದ ನಾಯಕನಾಗಿರಲಿಲ್ಲ ಅವರು ವಿವಿಧ ದೇಶ ಗಳ ಧರ್ಮಗುರುವಾಗಿ ಮಾರ್ಗದರ್ಶಕರಾಗಿದ್ದರು. ಅವರು ತಿಳಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಈಗಿನ ದಾಳಿಯನ್ನು ಕಂಡಾಗ ಮುಸ್ಲಿಂನ ಎರಡು ಪಂಗಡಗಳ ನಡುವೆ ಆಕ್ರೋಶಕ್ಕೆ ಕಾರಣವಾಗಬಹುದು.
ಖಮೇನಿ ಇರಾನ್ ನನ್ನು ಅನ್ವಸ್ತ್ರ ರಾಷ್ಟ್ರವನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು. ಇರಾನಿನ ಕಮಾಂಡ್ ಪಡೆ ಮೇಲೆ ಹಿಡಿತ ಇಟ್ಟಿದ್ದರು. ಇರಾನಿನ ಪ್ರತಿಕ್ರಿಯೆ ತುಂಬಾ ಬಲವಾಗಿದೆ. ಅದು ಈಗ ಭಯಂಕರ ದಾಳಿ ಶುರುಮಾಡಿದೆ. ರಾತ್ರೋರಾತ್ರಿ ಅನೇಕ ಡ್ರೋನ್ ಮತ್ತು ಮಿಸೈಲ್ ಗಳನ್ನು ಅಮೇರಿಕಾದ ಪ್ರಮುಖ ನೆಲೆ ಮತ್ತು ಸೇನಾ ನೆಲೆಗಳ ಮೇಲೆ ಹಾರಿಸಿದೆ.
ಇರಾನಿನ ವರದಿಯ ಪ್ರಕಾರ ಅಮೆರಿಕಾದ ಒಟ್ಟು 14 ನೆಲೆಗಳ ಮೇಲೆ ಪೆಟ್ಟು ಬಿದ್ದಿದೆ. ಇರಾನ್ UAE ಮೇಲೆ ಗುರಿ ಇಟ್ಟಿದ್ದು ಹೆಚ್ಚಾಗಿ. ವಿಶ್ವದ ಪ್ರವಾಸಿತಾಣ ಐಕಾನಿಕ್ ಪಾಮ್ ಜುಮೇ ಪ್ರದೇಶದ ಮೇಲೂ ಬಾಂಬ್ ಹಾಕಿದೆ, ಬುರ್ಜ್ ಖಲೀಫಾ ಪಕ್ಕದಲ್ಲಿ ಇರಾನ್ ಡ್ರೋನ್ ದಾಳಿ ಮಾಡಿದೆ.
ಇರಾನ್ ಹಾರ್ಮುಜ್ ಜಲಸಂದಿಯಲ್ಲಿ ತೈಲ ಟ್ಯಾಂಕನ್ನು, ಓಮೇನ್ ತೈಲ ಟ್ಯಾಂಕ್ ಗಳ ಮೇಲೆ ದಾಳಿ ಮಾಡಿದೆ ಆದರೆ ಯಾವುದೇ ಹಾನಿ ಆಗಿಲ್ಲ. ಅಮೇರಿಕಾದ ಬ್ರಹ್ಮಾಸ್ತ್ರ USS Abraham Lincoln ವಿಮಾನವಾಹಕ ನೌಕೆ ಅದರ ಮೇಲು ದಾಳಿ ಮಾಡಿದೆ ಎಂದು ತಿಳಿಸಿದ್ದು ಇದು ಅನುಮಾನಾಸ್ಪದವಾಗಿದೆ. ದುಬೈ ಹಾಗೂ ಅಬುದಾಬಿ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ.
ಇಸ್ರೇಲ್ ಬಳಿಯೂ ಭಾರಿ ದಾಳಿ ನಡೆದಿದ್ದು ಆರು ಜನ ಸಾವು ಹಾಗೂ ನೂರಾರು ಜನರು ಗಾಯಗೊಂಡಿದ್ದಾರೆ. ಬಹರೇನ್ ಬಳಿ ಇರುವ ಬ್ರಿಟನ್ ನ ಬೇಸ್ ಪಕ್ಕದಲ್ಲಿ ದಾಳಿ ನಡೆದಿದೆ ಅಲ್ಲಿ 300 ಬ್ರಿಟಿಷ್ ಸೈನಿಕರಿದ್ದರು ಆದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಹರೇನ್ ಬಳಿ ಅಮೇರಿಕಾದ ನೇವಿ ಹೆಡ್ ಕ್ವಾಟ್ರಸ್ ಮೇಲೆ ಡ್ರೋನ್ ಅಪ್ಪಳಿಸಿದೆ ಈ ನೆಲಕ್ಕೆ ಗಂಭೀರ ಹಾನಿಯಾಗಿದೆ.
ಈಗ ಅಮೆರಿಕ ಇಸ್ರೇಲ್ vs ಇರಾನ್ ನಡುವಿನ ಕದನ ಅರಬಿ ಸಮುದ್ರಕ್ಕೂ ವಿಸ್ತಾರವಾಗಿದೆ. ಯುರೇನಿಯಂ ಹಡಗನ್ನು ಅಮೇರಿಕಾ ಮುಳುಗಿಸಿದೆ. ಹಾರ್ಮುಜ್ ಜಲಸಂದಿಯಲ್ಲಿ ನೂರಾರು ಹಡಗುಗಳು ಸಿಲುಕಿಕೊಂಡಿದೆ. ಇರಾನ್ ಅರಬ್ ದೇಶಗಳ ಮೇಲೆ ಸರಣಿ ದಾಳಿ ಮಾಡುತ್ತಿದೆ.
ಗಲ್ಫ್ ರಾಷ್ಟ್ರಗಳು ಸೇರಿ ಅಂದರೆ ಗಲ್ಫ್ ಕೋ ಆಪರೇಷನ್ ಕೌನ್ಸಿಲ್ ತುರ್ತುಪರಿಸ್ಥಿತಿ ಹೇರಿದೆ. ಬಹರೇನ್, ಕುವೈತ್, ಕತಾರ್, UAE, ಓಮನ್ ರಾಷ್ಟ್ರಗಳು ಸೇರಿ ಇರಾನ್ ವಿರುದ್ಧ ನಿಂತಿವೆ.
ವರದಿಗಳು ಸೂಚಿಸುವಂತೆ ಸೌದಿ ಪಟ್ಟದ ಸರದಾರ ಮಹಮ್ಮದ್ ಬಿನ್ ಸಲ್ಮಾನ್ ಟ್ರಂಪ್ ಗೆ ಕರೆ ಮಾಡಿ ಬೇಗ ದಾಳಿ ಮಾಡಿ ಎಂಬ ಒತ್ತಡ ಹೇರಿದ್ದರು ಎಂದು ತಿಳಿದು ಬರುತ್ತದೆ.
ಇರಾನ್ ಇಸ್ರೇಲ್ ನ ಜೆರುಸೇಲಂ ಮೇಲೆ ಮಿಸ್ಸೈಲ್ ದಾಳಿ ಮಾಡಿದೆ ಇದು ಜನವಸತಿ ಕಟ್ಟಡಗಳ ಮೇಲು ಬಿದ್ದಿದೆ.
NATO ನ ಐದನೇ ವಿಧಿಯ ಪ್ರಕಾರ “ಯಾವುದೇ ಮಿತ್ರ ರಾಷ್ಟ್ರದ ಮೇಲೆ ದಾಳಿಯಾದರೆ ಉಳಿದ ರಾಷ್ಟ್ರಗಳು ಅದರೊಂದಿಗೆ ಹೋಗಬೇಕೆಂದು” ಇದೆ. ಟ್ರಂಪ್ ಪ್ರಕಾರ ಈ ಕದನವು ನಾಲ್ಕು ವಾರ ಅಥವಾ ಒಂದು ತಿಂಗಳು ಮುಂದುವರಿಯಬಹುದು ಆದರೆ ಅಮೇರಿಕಾದ ಬಳಿ ಇರುವ ಶಸ್ತ್ರಾಸ್ತ್ರಗಳು ಖಾಲಿಯಾದರೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಪರಿಹಾರವಾಗಿ ಅಮೇರಿಕಾ ಭಾರತದ ಮುಂದೆ ಶಸ್ತ್ರಾಸ್ತ್ರದ ಸಹಾಯ ಯಾಚಿಸಬಹುದು.
ಏನೇ ಆಗಲಿ ಈ ಯುದ್ಧದಿಂದ ಅನೇಕ ಸಾವು ನೋವುಗಳು ಕಂಡುಬಂದಿದ್ದು, ಇದು ಜಾಗತಿಕವಾಗಿ , ಆರ್ಥಿಕವಾಗಿ , ರಾಜಕೀಯವಾಗಿ ಎಲ್ಲದರೂ ಮೇಲು ಪರಿಣಾಮ ಬೀರುವುದು. ಅದೇ ರೀತಿ ನಮ್ಮ ಪ್ರಧಾನಿ ಇಸ್ರೇಲ್ ಮತ್ತು UAE ಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.