ಇಸ್ರೇಲ್‌ಗೆ ನಮೋ ಭೇಟಿ: ಜೆರುಸೆಲಂನಲ್ಲಿ ನೆತನ್ಯಾಹು ಜೊತೆ ಮೋದಿ ಮಹತ್ವದ ಮಾತುಕತೆ

ಇಸ್ರೇಲ್‌ಗೆ ನಮೋ ಭೇಟಿ: ಜೆರುಸೆಲಂನಲ್ಲಿ ನೆತನ್ಯಾಹು ಜೊತೆ ಮೋದಿ ಮಹತ್ವದ ಮಾತುಕತೆ ಯು ಜಗತ್ತನ್ನು ತನ್ನೆಡೆಗೆ ನೋಡುವಂತೆ ಮಾಡಿದೆ.

ಜೆರುಸೆಲಂ : ಇಸ್ರೇಲ್ನ ಪ್ರಧಾನಿ ಬೆಂಜಮೀನ್ ನೆತನ್ಯಾಹು ಭಾರತದ ಪ್ರಧಾನಿ ನರೇಂದ್ರ ಮೋದಿ ಯವರನ್ನು ತಮ್ಮ ತಾಯ್ನಾಡಿಗೆ ಗುರುವಾರದಂದು ಬರಮಾಡಿಕೊಂಡು ಅವರ ಜೊತೆ ಸೇರಿ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಸಿ ದ್ವಿಪಕ್ಷಿಯವಾಗಿ ಮಾತುಕತೆ ನಡೆಸಿದರು.

ನಮ್ಮ ಭಾರತ ಸ್ವಾತಂತ್ರ್ಯ ವಾದ ಮೇಲೆ ಇಸ್ರೇಲ್ ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂದು ಮೋದಿಯವರು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಗ ಕೃಷಿ, ನೀರಾವರಿ , ತಂತ್ರಜ್ಞಾನದ ಬಗ್ಗೆ ಹೆಚ್ಚು ಒತ್ತನ್ನು ನೀಡಲಾಗಿತ್ತು.

ಮೋದಿಯವರು ಇಸ್ರೇಲ್ ಗೆ 2017ರಲ್ಲಿ ಭೇಟಿ ನೀಡಿದ್ದರು ಅದಾದ ನಂತರ 2026ರಲ್ಲಿ ಭೇಟಿ ನೀಡಿದ್ದು ಬಹಳ ವಿಷಯಗಳ ಚರ್ಚೆಗೆ ಕಾರಣವಾಗಿದೆ.

ಇದರಲ್ಲಿ ನಾವು ಭಾರತ ಇಸ್ರೇಲ್ ನೊಂದಿಗೆ ರಕ್ಷಣಾ ಒಪ್ಪಂದ ಹಾಗೂ Iron Beem ಮೇಲೆ ಭಾರತದ ನೀಗಾ ಇದೆ. ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ, 2026 ರಲ್ಲಿ ಇಸ್ರೇಲ್ ಭಾರತದೊಂದಿಗೆ $8.6 ಬಿಲಿಯನ್ ಮೌಲ್ಯದ ಶಸ್ತ್ರಾಸ್ತ್ರ ಒಪ್ಪಂದಗಳಿಗೆ ಒಪ್ಪಿಕೊಂಡಿದೆ.

Iron Beem ವಾಯು ಆಧಾರಿತ ರಕ್ಷಣಾ ವ್ಯವಸ್ಥೆಯಾಗಿದೆ. ಇದು iron dome ಗಿಂತ ಕಡಿಮೆ ವೆಚ್ಚದಾಗಿದೆ. ಲೋರಾ ಕ್ಷಿಪಣಿ , ಗೋಲ್ಡನ್ ಹಾರಿಸನ್ ಕ್ಷಿಪಣಿ, ರಾಂಕ್ ಪೇಜ್, ಐಸ್ ಬ್ರೇಕರ್ ಮಿಸೈಲ್, ಮೊದಲಾದವು ಚರ್ಚೆಗೀಡಾಗಿವೆ.

ನೆತನ್ಯಾಹು ಚಕ್ರವ್ಯೂಹ:

ಮೋದಿಗಿಂತ ಮೊದಲು ಮೈತ್ರಿಕೂಟದ ಷಡ್ಭುಜಾಕೃತಿಯನ್ನು (Hexagon of alliance) ನೆತನ್ಯಾಹು ಪ್ರಸ್ತಾಪಿಸಿದರು. Hexagon of alliance ಜಗತ್ತಿನ ಆರು ಪ್ರಮುಖ ಜಾಗಗಳನ್ನು ಕನೆಕ್ಟ್ ಮಾಡಿ ನೆಟ್ವರ್ಕ್ ಕಟ್ಟೋದು ಇದರ ಉದ್ದೇಶ. ಅವುಗಳು ಯಾವುವು ಎಂದರೆ

1) ಇಸ್ರೇಲ್

2) ಭಾರತ 

3) ಅರಬ್ ರಾಷ್ಟ್ರಗಳು 

4) ಮೆಡಿಟೇರಿಯನ್ ಗ್ರೀಸ್ ಮತ್ತು ಸೈಪ್ರೆಸ್ 

5) ಏಷ್ಯಾದ ಕೆಲವು ಮಿತ್ರ ರಾಷ್ಟ್ರಗಳು

6) ಆಫ್ರಿಕಾದ ರಾಷ್ಟ್ರಗಳು

ಇದಕ್ಕೆ ಭಾರತ ಕೇವಲ ಸದಸ್ಯ ನಾಗಿ ಬರುತ್ತಿಲ್ಲ ಕಾರ್ಯತಂತ್ರ ಪಾಲುದಾರ ಆಗಿ ಸೇರಬೇಕು ಎಂದು ಇಸ್ರೇಲ್ ಆಗ್ರಹಿಸುತ್ತಿದೆ. ಆದರೆ ಭಾರತ ಇದರ ಕುರಿತು ಇನ್ನು ಏನು ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಈ ಒಕ್ಕೂಟದ ಮೂಲಕ ಸಾಧಿಸಬಹುದಾದ ಪ್ರಮುಖ ಗುರಿಗಳು:

1) ಆರ್ಥಿಕ ಸಹಕಾರ

2) ರಾಜತಾಂತ್ರಿಕ ಜೋಡಣೆ

3) ಭದ್ರತಾ ಸಹಯೋಗ

 

ಈ ಮೆಗಾ ಕೂಟದಿಂದ ಭಾರತಕ್ಕೆ ಏನು ಲಾಭ

✅ ರಕ್ಷಣಾ ಪ್ರಯೋಜನಗಳು

✅ ಆರ್ಥಿಕ ಪ್ರಯೋಜನಗಳು

✅ ಭೌಗೋಳಿಕ ರಾಜಕೀಯ ಸಮತೋಲನ

 

ಮೋದಿ ಅವರು ತಮ್ಮ ಭಾಷಣದಲ್ಲಿ:

ಪ್ರಧಾನಿ ನೆತನ್ಯಾಹು, ಮಿಸ್ಟರ್ ಅಮೀರ್ ಓಹಾನಾ, NSH ನ ಸ್ಪೀಕರ್, ವಿರೋಧ ಪಕ್ಷದ ನಾಯಕ, ಕ್ಯಾಡೆಸ್ಟ್ ಸದಸ್ಯ ಮಿಸ್ಟರ್ ಯಿದ್, ನನ್ನ ಪ್ರೀತಿಯ ಸಹೋದರ ಸಹೋದರಿಯರೇ ತಮಗೆಲ್ಲರಿಗೂ (Shalom ಶಾಂತಿ) ನಮಸ್ತೆ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು.

ಇಲ್ಲಿ ಬಂದಿರುವುದು ನನಗೆ ತುಂಬಾ ಗೌರವದ ಸನ್ನಿವೇಶ ವೆನಿಸುತ್ತದೆ . ಹಾಗೂ ನಾನು ನನ್ನ ಜೊತೆಗೆ 1.4 ಬಿಲಿಯನ್ ಭಾರತೀಯರ ಶುಭಾಶಯಗಳನ್ನು ಮತ್ತು ಸ್ನೇಹಯುತ ಸಂಬಂಧದ ಸಂದೇಶಗಳನ್ನು ತಂದಿದ್ದೇನೆ ಅದು ಕೂಡ ನಮ್ಮ ಪಾಲುದಾರಿಕೆ ಉತ್ತಮ ಸಂಬಂಧಕ್ಕಾಗಿ ಎಂದು ತಿಳಿಸಿದ್ದಾರೆ.

ಸ್ಪೀಕರ್ ಅವರಿಗೆ ಧನ್ಯವಾದಗಳು ತಿಳಿಸುತ್ತಾ ಮೋದಿ ಯವರು “ನಾನು 9 ವರ್ಷಗಳ ಹಿಂದೆ ಒಂದು ಸದ್ದುದ್ದೇಶ ಇಟ್ಟುಕೊಂಡು ಇಸ್ರೇಲ್ಗೆ ಬೇಬಿ ನೀಡಿದ್ದೆ. ನಾನು ಮತ್ತೊಂದು ಬಾರಿ ಇಲ್ಲಿಗೆ ಬಂದಿದ್ದು ನನಗೆ ತುಂಬಾ ಖುಷಿ ನೀಡಿದೆ. ನಾನು ಅದೇ ದಿನ ಹುಟ್ಟಿದ್ದು ಯಾವಾಗ ಭಾರತವು ಇಸ್ರೇಲ್ ಅನ್ನು ಔಪಚಾರಿಕವಾಗಿ ಗುರುತಿಸಿತು Sept 17 1950 ಎಂದು ಹೇಳಿದರು.

ಗೌರವಾನ್ವಿತ ಸದಸ್ಯರೇ ಯಾರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ, ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಬರ್ಬರ ಭಯೋತ್ಪಾದಕ ದಾಳಿಯಲ್ಲಿ ಛಿದ್ರಗೊಂಡ ಎಲ್ಲ ಕುಟುಂಬಗಳಿಗೆ ನನ್ನ ಜೊತೆಗೆ ಹಾಗೂ ಭಾರತದ ಪ್ರಜೆಗಳೊಂದಿಗೆ ನಾನು ಆಳವಾದ ಸಂತಾಪಗಳು ವ್ಯಕ್ತಪಡಿಸುತ್ತೇನೆ.

ಭಾರತ ಇಸ್ರೇಲ್ ನೊಂದಿಗೆ ಪೂರ್ಣ ದೃಢ ನಿಶ್ಚಯದೊಂದಿಗೆ ಈ ಸಂದರ್ಭದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಕೂಡ ಇರುವುದು. ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ.

ಭಾರತ ಮತ್ತು ಇಸ್ರೇಲ್ ದೀರ್ಘಕಾಲ ಭಯೋತ್ಪಾದನೆಯ ನೋವನ್ನು ಸಹಿಸಿಕೊಂಡವು. ನವೆಂಬರ್ 26 ರಂದು ಮುಂಬೈ ಮೇಲೆ ನಡೆದ ದಾಳಿ ಮತ್ತು ಇಸ್ರೇಲ್ ಪ್ರಜೆ ಸೇರಿದಂತೆ ಅಮಾಯಕರ ಜೀವಗಳು ಬಲಿಯಾದದ್ದು ನಮಗೆ ನೆನಪಿದೆ.

ನಾವು ಯಾವುದೇ ದ್ವಂದ್ವ ಮಾನದಂಡಗಳಿಲ್ಲದೆ ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಯ ಸ್ಥಿರ ಮತ್ತು ರಾಜಿಯಾಗದ ನೀತಿಯನ್ನು ಹೊಂದಿದ್ದೇವೆ.

ಭಯೋತ್ಪಾದನೆ ಗುರಿ ಸಮಾಜಗಳನ್ನು ಅಸ್ಥಿರಗೊಳಿಸಿ , ಅಭಿವೃದ್ಧಿಯನ್ನು ತಡೆಯುವುದು, ಜನರು ವಿಶ್ವಾಸವನ್ನು ಕುಗ್ಗಿಸುವುದು ಹೀಗೆ ಹಲವು ರೀತಿಯ ಗುರಿಗಳನ್ನು ಹೊಂದಿದೆ.

ಭಯೋತ್ಪಾದನೆಯನ್ನು ತೆಗೆದು ಹಾಕಲು ಸುಸ್ಥಿರ ಮತ್ತು ಸಮನ್ವಯವಾಗಿ ಜಾಗತಿಕವಾಗಿ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಕಾರಣ ಭಯೋತ್ಪಾದನೆಯು ಎಲ್ಲಿಯೂ ಇದೆ ಅದಕ್ಕಾಗಿ ಭಾರತ ಭಯೋತ್ಪಾದನೆಯ ವಿರುದ್ಧ ಇದ್ದು ಶಾಂತಿ, ಪ್ರಾದೇಶಿಕ, ಸ್ಥಿರತೆ ಯನ್ನು ಪ್ರೋತ್ಸಾಹಿಸುತ್ತದೆ.

ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಜೊತೆಗಿನ ಸಂಬಂಧಗಳನ್ನು ಪರಸ್ಪರ ಸ್ವತಂತ್ರವಾಗಿ ಇರಿಸಿಕೊಂಡಿದೆ. ಹಾಗೂ ಪ್ಯಾಲೆಸ್ಟೈನ್ ನ ಸಮಸ್ಯೆಗಳನ್ನು ಪರಿಹರಿಸಲು ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದರು.

ಶಾಂತಿ ಎನ್ನುವುದು ಸುಲಭದ ಕೆಲಸವಲ್ಲ ಆದರೂ ನಾವು ನಿಮ್ಮೊಂದಿಗೆ ಮತ್ತು ಜನರೊಂದಿಗೆ ಇದ್ದೇವೆ ಎಂದು ತಿಳಿಸಿದ್ದಾರೆ.

1) The benet israel of Maharashtra

ಮಹಾರಾಷ್ಟ್ರದ ಹಿತಚಿಂತಕ ಇಸ್ರೇಲ್

2) The cochins jews of keralam

ಕೇರಳದ ಕೊಚ್ಚಿನ್ ಯಹೂದಿಗಳು

3) The baghadadi jews of Kolkata and Mumbai

ಕೋಲ್ಕತ್ತಾ ಮತ್ತು ಮುಂಬೈನ ಬಾಗ್ದಾದಿ     ಯಹೂದಿಗಳು

4) The ben manasi of the northeast  ಈಶಾನ್ಯದ ಬೆನ್ ಮಾನಸಿ.

ಪ್ರಧಾನಿ ಮೋದಿ ಇತ್ತೀಚೆಗೆ ಗುಜರಾತ್‌ನಲ್ಲಿ ಬೆನೆ ಇಸ್ರೇಲಿ ಕುಟುಂಬವು ಸ್ಥಾಪಿಸಿದ ಶಾಲೆಯನ್ನು “ಅತ್ಯುತ್ತಮ ಶಾಲೆ” ಎಂದು ಉಲ್ಲೇಖಿಸಿ ಹೈಲೈಟ್ ಮಾಡಿದರು. ಈ ಸ್ವೀಕೃತಿಯು ಸಮುದಾಯವು ಶಿಕ್ಷಣದ ಮೇಲೆ ನೀಡುವ ಹೆಚ್ಚಿನ ಮೌಲ್ಯವನ್ನು ಒತ್ತಿಹೇಳುತ್ತದೆ. ಐತಿಹಾಸಿಕವಾಗಿ, ಭಾರತದಲ್ಲಿ ಬೆನೆ ಇಸ್ರೇಲ್ ಸಮುದಾಯವು ಶಿಕ್ಷಣದಲ್ಲಿ ತೊಡಗಿಸಿಕೊಂಡಿದೆ, ಇದರಲ್ಲಿ 19 ನೇ ಶತಮಾನದ ಅಂತ್ಯದಲ್ಲಿ ಎಲ್ಲಿ ಕದೂರಿ ಶಾಲೆಯಂತಹ ಶಾಲೆಗಳ ಸ್ಥಾಪನೆಯೂ ಸೇರಿದೆ.

 

✅ ಅಹಮದಾಬಾದ್‌ನ ಕಗೇರಿಯಾ ಯಹೂದಿ ಸಂಸ್ಥಾಪಕ ಡಾ. ರೂಬೆನ್ ಡೇವಿಡ್.

✅ ಡೇವಿಡ್ ಅಬ್ರಹಾಂ ಚುಲ್ಕರ್ ದೇಶಾದ್ಯಂತ ಮನೆಮಾತಾದರು.

✅ ವಾಲ್ಟರ್ ಕೌಫ್ಮನ್ ಆಲ್ ಇಂಡಿಯಾ ರೇಡಿಯೋಗಾಗಿ ಸಿಗ್ನೇಚರ್ ಟ್ಯೂನ್ ಅನ್ನು ಸಂಯೋಜಿಸಿದರು.

✅ ಡೇವಿಡ್ ಸ್ಯಾಸೂನ್ ಅನೇಕ ಸಂಸ್ಥೆಗಳನ್ನು ನಿರ್ಮಿಸಿದರು.

✅ ಜೆ.ಎಫ್.ಆರ್. ಜಾಕೋಬ್, 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ನಾಯಕ. ಪಾಕಿಸ್ತಾನದ ಪೂರ್ವ ಭಾಗದ ಪ್ರತ್ಯೇಕತೆಗೆ ಕಾರಣವಾದ 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಮುಖ್ಯಸ್ಥರಾಗಿದ್ದರು.

ನಾವು ಇವರೊಂದಿಗೆ ನಿವೃತ್ತಿ ನಂತರ ಅವರನ್ನು ಭೇಟಿ ಮಾಡಿದ್ದೆ ಹಾಗೂ ಇಸ್ರೇಲ್ ಜೊತೆಗೆ ಸಂಬಂಧದ ಕುರಿತು ಮಾತುಕತೆ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.

ಈ ಭೂಮಿಯೊಂದಿಗಿನ ಭಾರತದ ಸಂಪರ್ಕವು ರಕ್ತ ಮತ್ತು ತ್ಯಾಗದಲ್ಲಿ ಬರೆಯಲ್ಪಟ್ಟಿದೆ. ಈ ಪ್ರದೇಶದಲ್ಲಿ ಮೊದಲ ಜಾಗತಿಕ ಯುದ್ಧದಲ್ಲಿ 4000ಕ್ಕೂ ಹೆಚ್ಚು ಭಾರತೀಯ ಸೈನಿಕರು ತಮ್ಮ ಪ್ರಾಣ ತೆತ್ತರು.

✅ ೧೯೧೮ ಸೆಪ್ಟೆಂಬರ್ ಅಶ್ವದಳದ ದಾಳಿ ಮತ್ತು ಹಿಫಾ ಮಿಲಿಟರಿ ಇತಿಹಾಸದಲ್ಲಿ ಗಮನಾರ್ಹವಾಗಿದೆ.

 

✅  ಮೇಜರ್ ಟಾಕೂರ್ ದಲ್ಪಾ ಸಿಂಗ್ ಹಿಫಾದ ನಾಯಕ ಎಂದು ಬಣ್ಣಿಸಿದ್ದಾರೆ.

✅ ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನವು ಮಾನವೀಯತೆಯ ಕರಾಳ ಅಧ್ಯಾಯವಾಗಿದೆ.

✅ ಗುಜರಾತ್‌ನ ನವನಗರದ ಮಹಾರಾಜರನ್ನು ಜಾಮ್ ಸಾಹೇಬ್ ಎಂದು ಕರೆಯಲಾಗುತ್ತದೆ.

✅ ನಾನು 2006 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇಸ್ರೇಲ್‌ಗೆ ಮೊದಲ ಭೇಟಿ ನೀಡಿದ್ದೆ.

ಇವೆಲ್ಲದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಗತ್ತಿನಲ್ಲಿ ಭಾರತವು ಪ್ರಮುಖವಾಗಿ ಆರ್ಥಿಕತೆಯಲ್ಲಿ ಶೀಘ್ರವಾಗಿ ಬೆಳೆಯುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ನಾವು ಜಾಗತಿಕತೆಯ ಆರ್ಥಿಕತೆಯಲ್ಲಿ ಮೂರನೇ ಸ್ಥಾನವನ್ನು ಪಡೆಯುವುದು ಸಂದೇಹವಿಲ್ಲ ಎಂದಿದ್ದಾರೆ.

ಇಸ್ರೇಲ್ ನಾವೀನ್ಯತೆ ಮತ್ತು ತಂತ್ರಜ್ಞಾನ ನಾಯಕತ್ವದ ಶಕ್ತಿಯಾಗಿದೆ. ಇದು ಒಂದು ನೈಸರ್ಗಿಕ ತಳಹದಿಯಾಗಿದ್ದು ನಮ್ಮ ಪಾಲುದಾರಿಕೆಯ ಮುಂದಿನ ಹಾದಿಯಾಗಿದೆ. ವ್ಯಾಪಾರ, ಹೂಡಿಕೆ ಹರಿವು, ಜಂಟಿ ಮೂಲಸೌಕರ್ಯ ಅಭಿವೃದ್ಧಿ ವಿಸ್ತರಣೆ ಇವು ಪ್ರಮುಖವಾದವು.

ಭಾರತವು ಕಳೆದ ದಿನಗಳಲ್ಲಿ ವಿವಿಧ ದೇಶಗಳೊಂದಿಗೆ ಅನೇಕ ಒಪ್ಪಂದಗಳನ್ನು ಮಾಡಿಕೊಂಡಿರಿ ನಾವು ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಉದಾಹರಣೆಗೆ: ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್, ಭಾರತ ಮತ್ತು ಇಸ್ರೇಲ್, ಯುಇಎ ಮತ್ತು ಯುಎಸ್ ನಡುವೆ ಐ2, ಯು2 ಚೌಕಟ್ಟು.

ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯು ಒಂದು ಪ್ರಮುಖ ಸ್ತಂಭವಾಗಿದೆ. ನವೆಂಬರ್ 2025ರಲ್ಲಿ ನಾವು ಡಿಫೆನ್ಸ್ ಕೋ ಆಪರೇಷನ್ ಗೆ ಸಹಿ ಹಾಕಿದ್ದೇವೆ. ಭಾರತ ಮತ್ತು ಇಸ್ರೇಲ್‌ನಂತಹ ವಿಶ್ವಾಸಾರ್ಹ ಪಾಲುದಾರಿಕೆಯ ನಡುವಿನ ಇಂದಿನ ಬಲವಾದ ರಕ್ಷಣಾ ಪಾಲುದಾರಿಕೆಯಲ್ಲಿ ನಂಬಿಕೆ ಇದೆ. ಇಸ್ರೇಲನ್ನು “Startup Nation” ಎಂದು ಕರೆದಿದ್ದಾರೆ.

 

ಅಂತಿಮ ಮಾತು:

ಜೆರುಸೆಲಂನಲ್ಲಿ ನಡೆದ ಈ ಭೇಟಿ ಭಾರತ–ಇಸ್ರೇಲ್ ಸಂಬಂಧಗಳಿಗೆ ಹೊಸ ದಿಕ್ಕು ನೀಡಿದ್ದು, Narendra Modi ಮತ್ತು Benjamin Netanyahu ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ, ಶಾಂತಿ ಪ್ರಚಾರ, ತಂತ್ರಜ್ಞಾನ–ನವೀನತೆ ಸಹಕಾರ ಹಾಗೂ ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ದೃಢ ಸಂದೇಶ ಜಗತ್ತಿಗೆ ರವಾನೆಯಾಗಿದೆ.